ಕೆರಾಡಿಯ ಶಿವನ ದರ್ಶನವಾಗಿ ಹೋಗಿದೆ.
ಶಿವನ ಹೂ ತೋಟದಲ್ಲಿ ಬರ್ಮೆಯ ರೌದ್ರ ನರ್ತನ ಕಣ್ಣೆದುರೇ ಮೂಡಿಬಂದಿದೆ.
ಇಷ್ಟೆಲ್ಲಾ ಆದ್ಮೇಲೆ ಕಥೆ ಮುಗಿದೇ ಹೋಯ್ತು, “ಇನ್ನೇನು ಜೈ ಹನುಮಾನ್ ಅನ್ನೋದಷ್ಟೇ ಬಾಕಿ” ಅಂತ ಎಲ್ಲರೂ ಅಂದುಕೊಂಡಿದ್ದರು.
ಆದ್ರೆ…ಇದು ಅಂತ್ಯ ಅಲ್ಲ.
ಇದು ಇನ್ನೊಂದು ಅಧ್ಯಾಯದ ಆರಂಭ.
ಕಥೆ ಈಗ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಈ ತಿರುವು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಇದುವರೆಗಿನ ಪ್ರಯಾಣಕ್ಕಿಂತಲೂ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎನ್ನುವ ಗುಟ್ಟು ಅವರ ಆಪ್ತ ಮೂಲಗಳಿಂದ ಹೊರಬಿದ್ದಿದೆ.
ಕೆರಾಡಿ ಶಿವ: ರಿಷಬ್ ಶೆಟ್ಟಿಗೆ ಎದುರಾಗುತ್ತಿರುವ ಹೊಸ ಸವಾಲು!
ಕೆರಾಡಿಯ ಕಾಡಿನಲ್ಲಿ ಶಿವನಾಗಿ ಅವತರಿಸಿದ ಕ್ಷಣದಿಂದಲೇ ರಿಷಬ್ ಶೆಟ್ಟಿ ಒಂದು ಅಧ್ಯಾಯವನ್ನೇ ಬರೆಯುತ್ತಾನೆ.
ಶಿವನ ಹೂ ತೋಟದಲ್ಲಿ ನಡೆದ ಆ ರೌದ್ರ ನರ್ತನ…
ರುಂಡಚಂಡಾಡುವ ಆರ್ಭಟ…
ಇವೆಲ್ಲವೂ ಇಂದಿಗೂ ಸಿನಿಪ್ರೇಮಿಗಳ ಕಣ್ಣಿಗೆ ಕಟ್ಟಿದಂತಿವೆ.
ಶಿವನಿಂದ ಹಿಡಿದು ಬೆರ್ಮೆಯವರೆಗೂ, ಪ್ರತಿಯೊಂದು ರೂಪದಲ್ಲೂ ರಿಷಬ್ ಶೆಟ್ಟಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇಂದು ಅವರು ಕೇವಲ ನಟ ಅಲ್ಲ – ಭಾರತೀಯ ಚಿತ್ರರಂಗದ ಮುಕುಟಮಣಿ. ಕಾಂತಾರದಂತಹ ಐತಿಹಾಸಿಕ ಯಶಸ್ಸಿನ ನಂತರ, ಸುಲಭದ ಅವಕಾಶಗಳನ್ನು ತಳ್ಳಿಹಾಕಿ, ಸವಾಲುಗಳನ್ನೇ ಹುಡುಕುವ ಹಾದಿಯಲ್ಲಿ ಅವರು ನಡೆದು ಬರುತ್ತಿದ್ದಾರೆ.
ಆ ಹಾದಿಯಲ್ಲೇ ಹುಟ್ಟಿದ ಮಹತ್ವಾಕಾಂಕ್ಷಿ ಕಥೆಯೊಂದು – ಜೈ ಹನುಮಾನ್.
ಕಾಂತಾರ–1 ಬಳಿಕ ರಿಷಬ್ ಶೆಟ್ಟಿ ಸೈಲೆಂಟ್ ಆಗಿದ್ದಾರೆ ಅನ್ನೋ ಭಾವನೆ ಅಭಿಮಾನಿಗಳಲ್ಲಿ ಮೂಡಿರಬಹುದು. ಆದರೆ ಅದು ಮೌನವಲ್ಲ… ಮುಂದಿನ ಸ್ಫೋಟಕ್ಕೆ ಸಿದ್ಧತೆ. ತೆಲುಗು ಚಿತ್ರರಂಗದಲ್ಲಿ ಜೈ ಹನುಮಾನ್ ಮೂಲಕ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ಮಾತುಗಳು ಜೋರಾಗಿವೆ. ಆದ್ರೆ, ಇನ್ನೂ ಅಧಿಕೃತ ಘೋಷಣೆ ಮಾತ್ರ ಬಾಕಿ.
ಶಿವಾಜಿ ಮಹಾರಾಜರ ಬಯೋಪಿಕ್‌ಗೆ ಅಸ್ತು ಎಂದಿದ್ದಾರೆ ಅನ್ನೋ ಗುಸುಗುಸು ಕೇಳಿಬಂದರೂ, ಆ ಕಥೆಯೂ ಇನ್ನೂ ರಹಸ್ಯದ ತೆರೆಗೆ ಹಿಂದೆ ಉಳಿದಿದೆ.
ಆದ್ರೆ ಈಗ ಕೇಳಿಬರುತ್ತಿರುವ ಮಾತು ಮಾತ್ರ ದೊಡ್ಡದು…
ರಿಷಬ್ ಶೆಟ್ಟಿ ಮಲಯಾಳಂ ಚಿತ್ರರಂಗದ ಅತಿದೊಡ್ಡ ಸಿನಿಮಾಗೆ ಕೈ ಹಾಕುತ್ತಿದ್ದಾರೆ ಎನ್ನುವ ಸುದ್ದಿ ಸಿನಿರಂಗವನ್ನೇ ಕದಡುತ್ತಿದೆ. ಇದು ಅವರ ವೃತ್ತಿ ಜೀವನದ ಮತ್ತೊಂದು ಮಹಾಸವಾಲು… ಮತ್ತೊಂದು ಇತಿಹಾಸದ ಆರಂಭವಾಗಬಹುದು.
ಮಲೆಯಾಳಂನ 1000 ಕೋಟಿ ಸಿನಿಮಾದಲ್ಲಿ ರಿಷಬ್?
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ಹೀಗಾಗಿ ದೊಡ್ಡದೊಡ್ಡ ಕನಸುಗಳನ್ನು ಕಟ್ಟಬೇಕಿದೆ. ಅದರ ಮೇಲೆ ಫೋಕಸ್ ಆಗಿರೋ ಶೆಟ್ರಿಗೆ 1 ಸಾವಿರ ಕೋಟಿಯ ಬಿಗ್ಗೆಸ್ಟ್ ಆಫರ್ ಒಂದು ಬಂದಿದೆ ಅಂತ ಭಾರಿ ಚರ್ಚೆಗಳು ನಡೆಯುತ್ತಿವೆ. ಅದುವೇ ಮಲೆಯಾಳಂನಲ್ಲಿ 8 ವರ್ಷದಿಂದ ದೊಡ್ಡ ಚರ್ಚೆ ಆಗುತ್ತಿರೋ 1 ಸಾವಿರ ಕೋಟಿ ಬಜೆಟ್ನ ಸಿನಿಮಾ..
ಮಲಯಾಳಂನ ‘ರಂಡಮೂಳಂ’ ಕಾದಂಬರಿಗೆ ಮರುಜೀವ..!
ಹೌದು, ಮಲಯಾಳಂನಲ್ಲಿ ‘ರಂಡಮೂಳಂ’ ಎಂಬ ಕಾದಂಬರಿ ಬಹಳ ಜನಪ್ರಿಯ. ಭೀಮನ ದೃಷ್ಟಿಕೋನದಲ್ಲಿ ಮಹಾಭಾರತ ಕಥೆ ಈ ಕಾಂದಂಬರಿಯಲ್ಲಿದೆ. ಎಂ. ಟಿ. ವಾಸುದೇವನ್ ನಾಯರ್ ಈ ಕಾದಂಬರಿ ರಚಿಸಿದ್ದು, ದಶಕಗಳಿಂದ ಈ ಕಾದಂಬರಿಯನ್ನು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಆದ್ರೆ ಅದಕ್ಕೊಂದು ಸೂಕ್ತ ವೇದಿಕೆ ಸೃಷ್ಟಿಯಾಗಿರಲಿಲ್ಲ. ಕಾಂತಾರದ ಹಿಟ್ ಬಳಿಕ ಇಂಥಾದೊಂದು ಕನಸಿಗೆ ಮತ್ತೆ ಜೀವ ಬಂದಿದೆ.
ರಂಡಮೂಳಂ’ ಚಿತ್ರದಕ್ಕೆ ರಿಷಬ್ ನಟ, ನಿರ್ದೇಶಕ?
‘ರಂಡಮೂಳಂ’ ಸಿನಿಮಾ ಶೀಘ್ರದಲ್ಲೇ ನಿರ್ಮಾಣವಾಗುತ್ತದೆ ಅಂತ ಕಾದಂಬರಿ ಬರೆದ ಎಂ. ಟಿ. ವಾಸುದೇವನ್ ನಾಯರ್ ಪುತ್ರಿ ಅಶ್ವತ್ತಿ ನಾಯರ್ ಹೇಳಿದ್ದಾರೆ. ‘ರಂಡಮೂಳಂ’ ರೈಟ್ಸ್ ಉಡುಪಿಯ ಬಿ.ಆರ್ ಶೆಟ್ಟಿಯ ಬಳಿ ಇದೆಯಂತೆ. ರಿಷಬ್ ಶೆಟ್ಟಿ ಬಾಕ್ಸಾಫೀಸ್ನಲ್ಲಿ ಸಾವಿರ ಕೋಟಿ ಕಲೆಕ್ಷನ್ ಮಡೋ ತಾಕತ್ತಿರೋ ಹೀರೋ. ಅದರಲ್ಲೂ ಉಡುಪಿ ಜಿಲ್ಲೆಯ ಹುಡುಗ ರಿಷಬ್ ಶೆಟ್ಟಿ. ಹೀಗಾಗಿ ಈಡೋ ಜೋಡು ಸರಿಯಾಗಿ ಮ್ಯಾಚ್ ಆಗಿದ್ದು, ರಿಷಬ್ ಶೆಟ್ಟಿ ನಂಬಿ ನಿರ್ಮಾಪಕ ಬಿ.ಆರ್ ಶೆಟ್ಟಿ 1 ಸಾವಿರ ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡಿದ್ರು ಆಶ್ಚರ್ಯವೇನಿಲ್ಲ.